ಪದ್ಮಕವಿ
1528. ಜೈನಕವಿ. ವರ್ಧಮಾನಚರಿತೆಯನ್ನು ಬರೆದಿದ್ದಾನೆ. ತನ್ನ ಈ ಸಾಂಗತ್ಯ ಕಾವ್ಯವನ್ನು ಸಂಕಿಘಟ್ಟವೆಂಬ ಸ್ಥಳದಲ್ಲಿ 1528ರಲ್ಲಿ ರಚಿಸಿದುದಾಗಿ ತಿಳಿದುಬರುತ್ತದೆ. ತಂದೆ ನಾಗಯ್ಯ ತನ್ನನ್ನು ಭೋಗಿವೆಣ್ಗಳ ಕಣ್ಣಸಿರಿ ಎಂದು ಕರೆದುಕೊಂಡಿರುವುದನ್ನು ಗಮನಿಸಿದರೆ ಕವಿ ರಸಿಕನೆಂದು ತೋರುತ್ತದೆ. ವರ್ಧಮಾನ ಚರಿತೆ 12 ಸಂಧಿಗಳ ಸಾಂಗತ್ಯ ಕಾವ್ಯ. ಇದರಲ್ಲಿ 24ನೆಯ ತೀರ್ಥಂಕರನಾದ ವರ್ಧಮಾನನ ಕಥೆ ಇದೆ. ತನ್ನ ಇನಿಯಳನ್ನು ಸಂಬೋಧಿಸಿ ಕವಿ ಕಥೆ ಹೇಳಿದ್ದಾನೆ.		(ಎಚ್.ಪಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ